ನಾನು ಇಂದು ಈ ಬ್ಲಾಗ್ ಬರೆಯುವದನ್ನ ಶುರು ಮಾಡುತಿದ್ದೇನೆ. ಇದರ ಆರಂಭದಲ್ಲಿ ವಿಶ್ವಗುರು ಬಸವಣ್ಣನವರನ್ನು ನೆನೆದು ಮುಂದೆ ಸಾಗುವೆ.
ಪ್ರಥಮಂತು ಬಸವಣ್ಣ , ದ್ವಿತಿಯಂತು ಲಿಂಗವು ,
ತ್ರತಿಯಂತು ತತ್ವ ಬ್ರಹ್ಮಾಂಡವೆಲ್ಲ ,
ನಿಕಳಂಕ ಗುಣನಿಧಿ ಚಿದಾನಂದ ಬಸವಂಗೆ
ಭಕುತನಾದೆನು ಗುರುವೇ ಯೋಗಿನಾಥ !
-- ಶರಣ ಶಿವಯೋಗಿ ಸಿದ್ಧರಾಮೇಶ್ವರರು.
ಈ ಬ್ಲಾಗ್ ಶುರು ಮಾಡುವ ಉದ್ದೇಶವೇನೆಂದರೆ ನನ್ನ ಮನಸಿನ ಅನಿಸಿಕೆ ಗಳನ್ನ ವ್ಯಕ್ತ ಪಡಿಸುವದಕ್ಕಾಗಿ. ಬಹಳದಿನಗಳಿಂದ ಇಂಥದೊಂದು ಆಸೆ ಇತ್ತು, ಆದರೆ ಇದಕ್ಕೆ ಶುರು ಮಾಡುವುದು ಹೇಗೆ ಗೊತ್ತಾಗುತ್ತಿರಲಿಲ್ಲ. ಮನಸಲ್ಲಿ ಹಲವಾರು ವಿಷಯಗಳು ತುಂಬಿರುವಾಗ ಇಂಥದೊಂದು ದ್ವಂದ್ವ ಸ್ಥಿತಿ ಉಂಟಾಗುತ್ತದೆ ಅಂತ ಅನಿಸುತ್ತದೆ. ಇದೆ ಕಾರಣ ನಾನು ಬ್ಲಾಗ್ ಬರೆಯುವದನ್ನು ತಡಮಾಡಿ ಶುರು ಮಾಡಲು ಕಾರಣ.
ಏನೇ ಆದರೂ ಒಮ್ಮೆ ಧೈರ್ಯ ಮಾಡಿ ಬರೆಯುವದನ್ನು ಶುರು ಮಾಡಿದ್ದೇನೆ. ಇನ್ನು ಮುಂದೆ ಇದನ್ನು ಸಮಯಸಿಕ್ಕಾಗ ಬರೆಯಲು ಪ್ರಯತ್ನಿಸುತ್ತೇನೆ.
No comments:
Post a Comment